+91 96066 68597   vidyadansamiti1920@gmail.com

ವಿದ್ಯಾದಾನಸಮಿತಿಯ ವೆಬ್‌ಸೈಟ್‌ ಲೋಕಾರ್ಪಣೆಗೊಳಿಸಿದ ಡಾ. ವಿಜಯ ಸಂಕೇಶ್ವರ


ಉತ್ತರ ಕರ್ನಾಟಕದಲ್ಲಿ 100 ವರ್ಷಗಳನ್ನು ಪೂರೈಸಿದ ನಗರದ ವಿದ್ಯಾದಾನ ಸಮಿತಿ ಹಲವಾರು ರಾಜಕಾರಣಿಗಳು, ಕ್ರೀಡಾಪಟುಗಳು ಹಾಗೂ ವಿವಿಧ ಸ್ತರಗಳಲ್ಲಿ ಸಾಧನೆ ಮಾಡಿದ ಅನೇಕ ವ್ಯಕ್ತಿಗಳನ್ನು ನೀಡಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹೇಳಿದರು.

ನಗರದ ವಿದ್ಯಾದಾನ ಸಮಿತಿಯ ಶತಮಾನೋತ್ಸವ ವರ್ಷಾಚರಣೆ ಪ್ರಯುಕ್ತ ಸಂಸ್ಥೆಯ 100 ವರ್ಷಗಳಸಾಧನೆ, ವಿವರಗಳನ್ನು ಹೊಂದಿರುವವಿದ್ಯಾದಾನ ಸಮಿತಿ ವೆಬ್‌ಸೈಟ್ www.vidyadansamiti.org ಅನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಉದ್ಘಾಟಿಸಿದರು.

ವಿದ್ಯಾದಾನಸಮಿತಿಯ ಗಂಡು ಮಕ್ಕಳಶಾಲೆಯಲ್ಲಿ ಕಲಿತದ್ದು ನನಗೆ ಹೆಮ್ಮೆಯ ವಿಷಯವಾಗಿದೆ.

ಆ ದಿನಗಳನ್ನು ನಾನು ಎಂದೂ ಮರೆಯಲಾರೆ. ನಾಡಕವಿ ಹುಯಿಲಗೋಳ ನಾರಾಯಣರಾಯರುಸ್ಥಾಪಿಸಿದ ವಿದ್ಯಾದಾನ ಸಮಿತಿ 100 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಬಂದಿದೆ. ಸಂಸ್ಥೆ ಮುನ್ನಡೆಸುತ್ತಿರುವ ಅಧ್ಯಕ್ಷರಾದ ಡಿ.ಬಿ.ಹುಯಿಲಗೋಳ, ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಕಾರ್ಯಕಾರಿ ಮಂಡಳಿಯ ಸದಸ್ಯರು ಅಭಿನಂದನಾರ್ಹರು, ಬರುವ ದಿನಗಳಲ್ಲಿ ಸಂಸ್ಥೆ ಸುಸಜ್ಜಿತ ಕಟ್ಟಡ ಹೊಂದಿ ಮಾದರಿ ಸಂಸ್ಥೆಯಾಗಿ ಬೆಳೆಯಬೇಕು. ಶತಮಾನ ಕಂಡ ಈ ಸಂಸ್ಥೆಯ ವೆಬ್‌ಸೈಟ್ ಉದ್ಘಾಟನೆ ಮಾಡುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದರು.

ವಿದ್ಯಾದಾನ ಸಮಿತಿ ಅಧ್ಯಕ್ಷ ಡಿ.ಬಿ.ಹುಯಿಲಗೋಳ ಮಾತನಾಡಿ ವರ್ಷದುದ್ದಕ್ಕೂ ಹಲವಾರು  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಸದಸ್ಯರಾದ ಡಾ.ಪವನ ಎಸ್. ಹುಯಿಲಗೋಳ, ಪ್ರತೀಕ.ಎಸ್. ಹುಯಿಲಗೋಳ ಉಪಸ್ಥಿತರಿದ್ದರು.